ಬುಧವಾರ, ಫೆಬ್ರವರಿ 14, 2018

ಐಕಾನಿಕ್ ಟೂರಿಸ್ಟ್ ಸೈಟ್’ ಆಗಿ ಹಂಪಿ ಅಭಿವೃದ್ಧಿಗೆ ಕೇಂದ್ರ ನಿರ್ಧಾರ

ಐಕಾನಿಕ್ ಟೂರಿಸ್ಟ್ ಸೈಟ್’ ಆಗಿ ಹಂಪಿ ಅಭಿವೃದ್ಧಿಗೆ ಕೇಂದ್ರ ನಿರ್ಧಾರ
============
ಬಳ್ಳಾರಿ: ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಸಾರುವ ಹಂಪಿಯನ್ನು ದೇಶದ ‘ಐಕಾನಿಕ್ ಟೂರಿಸ್ಟ್ ಸೈಟ್’ನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
============
ಸಮಗ್ರ ಮೂಲಸೌಕರ್ಯ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ದೇಶದ 10 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದಾಗಿ ಮತ್ತು ಪುರಾತತ್ವ ಇಲಾಖೆಯ 100 ಆದರ್ಶ ಶಿಲಾ ಶಾಸನಗಳಲ್ಲಿ ಟೂರಿಸ್ಟ್ ಸೌಲಭ್ಯಗಳನ್ನು ಅಪ್‌ಗ್ರೇಡ್ ಮಾಡುವುದಾಗಿ ಬಜೆಟ್ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು.
==========
ಇದೀಗ ಆಯ್ಕೆಗೊಂಡ ಪ್ರವಾಸಿ ತಾಣಗಳನ್ನು ಘೋಷಣೆ ಮಾಡಲಾಗಿದ್ದು, ಇವುಗಳಲ್ಲಿ ರಾಜ್ಯದ ಹಂಪಿಯೂ ಒಂದಾಗಿದೆ.
=============
ಈ ಪ್ರವಾಸಿ ತಾಣಗಳಲ್ಲಿ ಟಾಯ್ಲೆಟ್ ವ್ಯವಸ್ಥೆ, ಕುಡಿಯುವ ನೀರು, ಕುಳಿತುಕೊಳ್ಳುವ ಆಸನ, ಪಾಥ್‌ವೇ, ವಿಕಲ ಚೇತನರಿಗಾಗಿ ರ‍್ಯಾಂಪ್, ಕಸದಬುಟ್ಟಿ, ಸುಧಾರಿತ ಪಾರ್ಕಿಂಗ್ ವ್ಯವಸ್ಥೆ, ಟಿಕೆಟ್ ಕೌಂಟರ್, ಲ್ಯಾಂಡ್‌ಸ್ಕೇಪಿಂಗ್ ಇತ್ಯಾದಿ ಅಭಿವೃದ್ಧಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ.
==========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ