ಗುರುವಾರ, ಫೆಬ್ರವರಿ 15, 2018

ನೇಪಾಳ ಪ್ರಧಾನಿಯಾಗಿ ಶರ್ಮ ಒಲಿ ನೇಮಕ

ನೇಪಾಳ ಪ್ರಧಾನಿಯಾಗಿ ಶರ್ಮ ಒಲಿ ನೇಮಕ
==============
*ಕಾಠ್ಮಂಡು: ನೇಪಾಳದ 41ನೇ ಪ್ರಧಾನಿಯಾಗಿ ಸಿಪಿಎನ್-ಯು.ಎಂ.ಎಲ್ ಅಧ್ಯಕ್ಷ ಕೆ.ಪಿ.ಶರ್ಮ ಒಲಿ ಗುರುವಾರ ಎರಡನೇ ಬಾರಿಗೆ ನೇಮಕಗೊಂಡರು.*
=============
*ಪ್ರಧಾನಿಯಾಗಿದ್ದ ಷೇರ್ ಬಹದ್ದೂರ್ ದೇವುಬಾ ರಾಜೀನಾಮೆ ನೀಡಿದ ಕಮ್ಯೂ ನಿಸ್ಟ್-ಮಾವೋವಾದಿ ಮಿತ್ರಪಕ್ಷದ ನಾಯಕ ಶರ್ಮ ಪ್ರಧಾನಿಯಾಗಲು ಅನುವು ಮಾಡಿಕೊಟ್ಟರು. 65 ವರ್ಷದ ಶರ್ಮ ಅವರನ್ನು ಅಧ್ಯಕ್ಷರಾದ ಬಿಧ್ಯಾ ದೇವಿ ಭಂಡಾರಿ ನೇಮಕ ಮಾಡಿದರು.*
==============
*ಚೀನಾ ಪರ ವಿಶೇಷ ಒಲವು ಹೊಂದಿರುವ ಶರ್ಮಾ, 2015ರ ಅಕ್ಟೋಬರ್ 11 ರಿಂದ 2016ರ ಆ.3ರವರೆಗೆ ಪ್ರಧಾನಿಯಾಗಿದ್ದರು. ದೇಶದ ಐಸಿಹಾಸಿಕ ಸಂಸತ್ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ದೇವುಬಾ ನೇತೃತ್ವದ ಆಡಳಿತರೂಢ ನೇಪಾಳಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು.*
================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ