ರಕ್ಷಣಾ ಬಜೆಟ್: ಟಾಪ್ 5ನಲ್ಲಿ ಭಾರತ
======≠========≠
ಲಂಡನ್: ಆಂತರಿಕ ಭದ್ರತೆ ಹಾಗೂ ಶತ್ರು ರಾಷ್ಟ್ರಗಳ ಸಂಭಾವ್ಯ ದಾಳಿ ತಡೆಯಲು ಇತ್ತೀಚಿನ ವರ್ಷಗಳಲ್ಲಿ ಎಲ್ಲ ರಾಷ್ಟ್ರಗಳೂ ಪೈಪೋಟಿಗೆ ಬಿದ್ದಂತೆ ರಕ್ಷಣೆಗೆ ಭಾರಿ ಹಣವನ್ನು ಹೂಡಿಕೆ ಮಾಡುತ್ತಿವೆ. ಆಧುನಿಕ ಶಸ್ತ್ರಾಸ್ತ್ರ ಹಾಗೂ ಉಪಕರಣಗಳೊಂದಿಗೆ ಸೇನೆಯನ್ನು ಸದಾ ಕಾಲ ಸನ್ನದ್ಧ ಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಪ್ರತಿ ವರ್ಷರಕ್ಷಣಾ ಬಜೆಟ್ ಒಂದಷ್ಟು ಏರಿಸುತ್ತಲೇ ಇರುತ್ತವೆ. ಭಾರತವೂ ಇದಕ್ಕೆ ಹೊರತಲ್ಲ. ಹೀಗಾಗಿಯೇ ದೇಶದ ರಕ್ಷಣಾ ಬಜೆಟ್ ಈಗ ವಿಶ್ವದ ಐದು ಪ್ರಮುಖ ರಾಷ್ಟ್ರಗಳೊಂದಿಗೆ ಗುರುತಿಸಿಕೊಂಡಿದೆ.
==============
2017ನೇ ಸಾಲಿನಲ್ಲಿ ರಕ್ಷಣೆಗೆ ಅತಿ ಹೆಚ್ಚು ಅನುದಾನ ವಿನಿಯೋಗಿಸಿದ ರಾಷ್ಟ್ರಗಳ ಪೈಕಿ ಟಾಪ್ 5ನಲ್ಲಿ ಭಾರತ ಗುರುತಿಸಿಕೊಂಡಿದೆ. ಈ ಮೂಲಕ ಅದು 5ನೇ ಸ್ಥಾನದಲ್ಲಿದ್ದ ಬ್ರಿಟನ್‌ನನ್ನೂ ಹಿಂದಿಕ್ಕಿದೆ ಎಂದು ಇಂಟರ್‌ನ್ಯಾಷನಲ್ ಇನ್ಸಿಟ್ಯೂಟ್ ಫಾರ್ ಸ್ಟ್ರ್ಯಾಟಿಜಿಕ್ ಸ್ಟಡೀಸ್ ಸಿದ್ಧಪಡಿಸಿದ 'ಮಿಲಿಟರಿ ಬ್ಯಾಲೆನ್ಸ್ 2018' ವರದಿ ಹೇಳಿದೆ. ಕಳೆದ ವರ್ಷ ರಕ್ಷಣೆಗೆ ವಿನಿಯೋಗಿಸಿದ ಅತಿ ಹೆಚ್ಚಿನ ಮೊತ್ತದಲ್ಲಿಅಮೆರಿಕ 38,52,910 ಕೋಟಿ ರೂ.ದೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚೀನಾ, ಸೌದಿ ಅರೇಬಿಯಾ, ರಷ್ಯಾ, ಭಾರತ ಇವೆ. ಬ್ರಿಟನ್ 2016ರಲ್ಲಿ ರಕ್ಷಣೆಗೆ 3,35,545 ಕೋಟಿ ರೂ. ವಿನಿಯೋಗಿಸಿದ್ದರೆ 2017ನೇ ಸಾಲಿನಲ್ಲಿ ಇದು 3,24,058 ಕೋಟಿ ರೂ.ಗೆ ಇಳಿದಿದೆ.
======≠======
ಕಳೆದ ನಾಲ್ಕೈದು ವರ್ಷಗಳಿಂದ ಚೀನಾ ಜಲಾಂತರ್ಗಾಮಿ, ಯುದ್ಧ ನೌಕೆಗಳು, ಸಮರ ವಿಮಾನಗಳ ನಿರ್ಮಾಣ ಸೇರಿದಂತೆ ಸೇನೆಯ ಆಧುನೀಕರಣಕ್ಕೆ ದೊಡ್ಡ ಮೊತ್ತದಲ್ಲಿ ಹಣ ವಿನಿಯೋಗಿಸುವ ಮೂಲಕ ಏಷ್ಯಾ ವಲಯದಲ್ಲಿ ದೈತ್ಯ ಶಕ್ತಿಯಾಗಿ ಪ್ರಾಬಲ್ಯ ಮರೆಯಲು ಯತ್ನಿಸುತ್ತಿದೆ. ಇತ್ತ ಪಾಕಿಸ್ತಾನವೂ ಅದರ ಜತೆ ಕೈ ಜೋಡಿಸಿರುವ ಕಾರಣ ಇದಕ್ಕೆ ಪ್ರತಿಯಾಗಿ ಭಾರತ ಭದ್ರತೆಗೆ ಹೆಚ್ಚಿನ ಒತ್ತುಕೊಟ್ಟು ಸೇನೆಯ ಬಲವರ್ಧನೆಗೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ ಎಂದು ವರದಿ ವಿಶ್ಲೇಷಿಸಿದೆ. ಡೋಕ್ಲಾಮ್ ಬಿಕ್ಕಟ್ಟಿನ ಬಳಿಕ ಚೀನಾ ರಕ್ಷಣಾ ವೆಚ್ಚದಲ್ಲಿ ಶೇ.25ರಷ್ಟು ಏರಿಕೆ ಕಂಡುಬಂದಿದ್ದರೆ, ಭಾರತದ ರಕ್ಷಣಾ ವೆಚ್ಚ ಶೇ.2.4ರಷ್ಟು ಮಾತ್ರ ಏರಿಕೆಯಾಗಿದೆ.
======≠======
ರಕ್ಷಣೆಗೆ ಗರಿಷ್ಠ ಮೊತ್ತ ವಿನಿಯೋಗಿಸಿದ ಟಾಪ್ 5 ದೇಶಗಳು (ಕೋಟಿ ರೂ.ಗಳಲ್ಲಿ)
==============
*ಅಮೆರಿಕ 38,52,910
*ಚೀನಾ 9, 61,959
*ಸೌದಿ ಅರೇಬಿಯಾ 4,90,242
*ರಷ್ಯಾ 3,91,171
*ಭಾರತ 3, 35,545
============
ಗುರುವಾರ, ಫೆಬ್ರವರಿ 15, 2018
ರಕ್ಷಣಾ ಬಜೆಟ್: ಟಾಪ್ 5ನಲ್ಲಿ ಭಾರತ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ