ರಾಷ್ಟ್ರೀಯ ಕ್ರೀಡಾ ದಿನಾಚರಣೆ; ಧ್ಯಾನ್‌ಚಂದ್ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು
========================
ಹೊಸದಿಲ್ಲಿ: ಮೇಜರ್ ಧ್ಯಾನ್ ಚಂದ್ ಭಾರತವಷ್ಟೇ ಅಲ್ಲ. ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಕ್ರೀಡಾಪಟು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ರನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಇಡಿ ಜಗತ್ತಿನಲ್ಲೇ ಧ್ಯಾನ್‌ಚಂದ್ಸರಿಗಟ್ಟುವ ಆಟಗಾರನೂ ಯಾರೂ ಇರಲಿಲ್ಲ. 'ದಾದಾ' ಎಂಬ ಅಕ್ಕರೆಯ ಹೆಸರಿನಿಂದಲೇ ಕರೆಯಲ್ಪಡುವ ಧ್ಯಾನ್ ಚಂದ್ ಅವರಿಗೆ 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಗೌರವಿಸಿದೆ.
=========÷=====÷===
ಧ್ಯಾನ್‌ಚಂದ್ ಹುಟ್ಟುಹಬ್ಬ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. 1928, 1932 ಹಾಗೂ 1936ರಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದು ಕೊಟ್ಟಿರುವ ಧ್ಯಾನ್‌ಚಂದ್ ಒಟ್ಟು 400 ಅಂತರಾಷ್ಟ್ರೀಯ ಗೋಲುಗಳನ್ನು ಬಾರಿಸಿದ್ದರು. ಹಾಗೆಯೇ 1948ರಲ್ಲಿ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಹಾಡಿದ್ದರು.
================
============
ಜನನ: 29 ಆಗಸ್ಟ್ 1905
ಮರಣ: 3 ಡಿಸೆಂಬರ್ 1979
=============
ಧ್ಯಾನ್‌ಚಂದ್ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು
=============
01. ಚಿಕ್ಕವನಾಗಿದ್ದಾಗ ರೆಸ್ಲಿಂಗ್‌ನತ್ತ ಧ್ಯಾನ್‌ಚಂದ್ ಅತಿ ಹೆಚ್ಚು ಅಭಿರುಚಿಯನ್ನು ಹೊಂದಿದ್ದರು.
02. 16ರ ಹರೆಯದಲ್ಲಿ ಸಿಪಾಯಿಯಾಗಿ ಬ್ರಿಟಿಷ್ ಸೇನೆಯನ್ನು ಸೇರಿದ್ದರು.
03. ಧ್ಯಾನ್‌ಚಂದ್ ನಿಜ ಹೆಸರು ಧ್ಯಾನ್ ಸಿಂಗ್ ಎಂದಾಗಿದೆ. ಆದರೆ ತಡ ರಾತ್ರಿವರೆಗೂ ಚಂದಿರನ ಬೆಳಕಲ್ಲಿ ಅಭ್ಯಾಸಿಸುತ್ತಿರುವುದರಿಂದ ಪ್ರೀತಿಯಿಂದ ಧ್ಯಾನ್‌ಚಂದ್ ಎಂದು ಹೆಸರಿಸಲಾಗಿತ್ತು
04. 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಂದ್ ಅವರಿಗೆ ಜರ್ಮನ್ ಪೌರತ್ವವನ್ನು ನೀಡುವುದಾಗಿ ಹಿಟ್ಲರ್ ಘೋಷಿಸಿದ್ದರು. ಆದರೆ ಇದನ್ನು ಧ್ಯಾನ್‌ಚಂದ್ ಸ್ವೀಕರಿಸಲಿಲ್ಲ.
05. ಎದುರಾಳಿಗಳು ಧ್ಯಾನ್‌ಚಂದ್ ಬಗ್ಗೆ ಎಷ್ಟು ಭಯಭೀತಗೊಂಡಿದೆಯೆಂದರೆ ಹಾಲೆಂಡ್ ಅಧಿಕಾರಿಗಳು ಮ್ಯಾಗ್ನೆಟ್ ಹೊಂದಿದೆಯೇ ಎಂಬುದನ್ನು ಪರಿಶೀಲಿಸಲು ಅವರ ಹಾಕಿ ಸ್ಟಿಕ್ ಮುರಿದಿದ್ದರು.
06. 1936ರಲ್ಲಿ ಜರ್ಮನ್ ಗೋಲ್ ಕೀಪರ್ ಟಿಟೊ ವಾರ್ನ್‌ಹೋಲ್ಟ್ಜ್ ಜೊತೆ ಢಿಕ್ಕಿ ಹೊಡೆದ ಧ್ಯಾನ್‌ಚಂದ್ ತಮ್ಮ ಹಲ್ಲನ್ನು ಕಳೆದುಕೊಂಡಿದ್ದರು.
07. ಒಲಿಂಪಿಕ್ ಚಿನ್ನದ ಸಾಧನೆ
================
1928: ಆರ್ಮ್‌ಸ್ಟೆರ್‌ಡ್ಯಾಮ್
1932: ಲಾಸ್ ಏಜಂಲೀಸ್
1936: ಬರ್ಲಿನ್
08. 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರದಿಂದ ಗೌರವ
09. ಭಾರತೀಯ ಸೇನೆಯಲ್ಲಿ ಮೇಜರ್ ಪದವಿಯಲ್ಲಿ ನಿವೃತ್ತಿ
10. 400ಕ್ಕೂ ಹೆಚ್ಚು ಅಂತರಾಷ್ಟ್ರೀಯ ಗೋಲುಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ