ಐದು ಸಲ ಸಿಎಂ.. ಆಸ್ತಿ ಮೌಲ್ಯ ಗೊತ್ತಾದರೆ ಶಾಕ್ ಆಗ್ತೀರ!
===============
ರಾಜಕೀಯದಲ್ಲಿ ಸ್ವಾರ್ಥಕ್ಕಾಗಿ ಅಲ್ಲದೆ, ಕೇವಲ ದೇಶಕ್ಕಾಗಿ, ಜನರಿಗಾಗಿ ಬದುಕುವ ನಾಯಕರು ಕಾಣಿಸುತ್ತಾರಾ? ಸಾಮಾನ್ಯವಾಗಿ ಆದರೆ ಕಾಣಿಸಲ್ಲ ಎಂಬ ಉತ್ತರ ಸಿಗುತ್ತದೆ. ಆದರೆ ಒಬ್ಬ ನಾಯಕನಿಗೆ ಮಾತ್ರ, ಈಗಲು ಸ್ವಂತ ಮನೆಯಿಲ್ಲ. ಅವರೇನು ಸಾಮಾನ್ಯ ಮುಖಂಡನಲ್ಲ.
==============
ಒಂದು ರಾಜ್ಯದ ಮುಖ್ಯಮಂತ್ರಿ. ಇದುವರೆಗೆ ನಾಲ್ಕು ಸಲ ಮುಖ್ಯಮಂತ್ರಿಯಾಗಿದ್ದಾರೆ. ಅವರ ಜೀವನದಲ್ಲಿ ಇದುವರೆಗೂ ಇನ್‍ಕಮ್ ಟ್ಯಾಕ್ಸ್ ಪತ್ರಗಳನ್ನು ಸಲ್ಲಿಸಿಲ್ಲ. ಕನಿಷ್ಠ ಸ್ವಂತ ಮನೆ ಸಲ ಇಲ್ಲ. ಮುಖ್ಯಮಂತ್ರಿಯಾಗಿ ಒಮ್ಮೆಯಲ್ಲ ಎರಡು ಸಲ ಅಲ್ಲ.. 1998ರಿಂದ ನಿರಂತರವಾಗಿ 5 ಸಲ ಆ ರಾಜ್ಯವನ್ನು ಪರಿಪಾಲಿಸಿದ್ದಾರೆ.
============
ಜನರೇ ಅವರ ಆಸ್ತಿ ಪಾಸ್ತಿಗಳು… ತನ್ನ ಮುಖ್ಯಮಂತ್ರಿ ಪದವಿಯಿಂದ ಬರುವ ಸಂಬಳದಲ್ಲಿ ಸಹ ಮೂರನೇ ಒಂದು ಭಾಗವನ್ನು ಮಾತ್ರ ತೆಗೆದುಕೊಳ್ಳುವಷ್ಟು ಉದಾರಿ. ಇದುವರೆಗೂ ಸ್ವಂತ ಮನೆ ಇಲ್ಲದ ಪ್ರಜಾ ನಾಯಕ. ನಿಸ್ವಾರ್ಥ ರಾಜಕಾರಣಿ ಎಂದು ಹೆಸರು ಗಳಿಸಿರುವ ಆ ಮುಖ್ಯಮಂತ್ರಿ ಬೇರೆ ಯಾರೋ ಅಲ್ಲ… ತ್ರಿಪುರ ಸಿಎಂ ಮಾಣಿಕ್ ಸರ್ಕಾರ್. 5 ಸಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ವ್ಯಕ್ತಿ. ಸಾವಿರಾರು ಕೋಟಿ ಆಸ್ತಿ ಮಾಡುತ್ತಿರುವ ಈ ದಿನಗಳಲ್ಲಿ ಕೇವಲ ರೂ.1520 ರೂಪಾಯಿಗಳೇ ಆಸ್ತಿಯಾಗಿ ಇರುವುದು ನಿಜವಾಗಿಯೂ ಮಹತ್ವದ ಸಂಗತಿ. ದೇಶದಲ್ಲಿನ ಅತ್ಯಂತ ಬಡ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ್ದಾರೆ ಮಾಣಿಕ್ ಸರ್ಕಾರ್. ಇತ್ತೀಚೆಗೆ ಅವರು ಸಲ್ಲಿಸಿದ ನಾಮಿನೇಷನ್ ಪತ್ರದಲ್ಲಿ ಬೆಚ್ಚಿಬೀಳುವ ವಾಸ್ತವ ಸಂಗತಿಗಳಿವೆ.
=============
ಮಾಣಿಕ್ ಸರ್ಕಾರ್ ಸಲ್ಲಿಸಿರುವ ನಾಮಿನೇಷನ್ ದಾಖಲೆಯಲ್ಲಿ ಅಗರ್ತಲದಲ್ಲಿ 0.0018 ಎಕರೆ ಕೃಷಿಯೇತರ ಭೂಮಿ ಇದೆ ಎಂದು ಹೇಳಿಕೊಂಡಿದ್ದಾರೆ. ತನ್ನ ಪ್ರಸ್ತುತ ಆಸ್ತಿ ರೂ.1520 ಎಂದು ತೋರಿಸಿದ್ದಾರೆ. ಅವರ ಬ್ಯಾಂಕ್ ಖಾತೆಯಲ್ಲಿ ರೂ.2410 ಇದೆ. 2013ರ ಚುನಾವಣೆ ಸಂದರ್ಭದಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ರೂ.9720 ಮಾತ್ರ ಇತ್ತು. ಸಿಎಂ ಆಗಿ ಸರ್ಕಾರ್‌ಗೆ ಬರುವ ಸಂಬಳ ರೂ.26315. ಆ ಹಣವನ್ನು ಪಕ್ಷ (ಸಿಪಿಐ) ನಿಧಿಗೆ ನೀಡುತ್ತಾರೆ. ಅದಕ್ಕಾಗಿ ಅವರಿಗೆ ತಿಂಗಳಿಗೆ ರೂ.9700 ಪಕ್ಷದ ಭತ್ಯೆಯಾಗಿ ಸಲ್ಲಿಸುತ್ತಾರೆ.
===============
ಸರ್ಕಾರ್ ಬಳಿ ಮೊಬೈಲ್ ಫೋನ್ ಸಹ ಇಲ್ಲ. ಸಾಮಾಜಿಕ ಮಾಧ್ಯಮದ ಖಾತೆಗಳಿಲ್ಲ. ಸರ್ಕಾರ್ ಪತ್ನಿ ಪಾಂಚಾಲಿ ಭಟ್ಟಾಚಾರ್ಜಿ ಒಬ್ಬ ನಿವೃತ್ತ ಸರಕಾರಿ ಉದ್ಯೋಗಿ. ಆಕೆ ಖಾತೆಯಲ್ಲಿ ಮಾತ್ರ ರೂ.12 ಲಕ್ಷಗಳ ನಗದು ಇರುವುದಾಗಿ ಅಫಿಡವೆಟ್‌ನಲ್ಲಿ ತಿಳಿಸಿದ್ದಾರೆ. ಸಿಎಂ ಅಧಿಕೃತ ನಿವಾಸದಲ್ಲಿರುವ ಇವರಿಗೆ ಸ್ವಂತ ಮನೆಯಿಲ್ಲ. ಸರ್ಕಾರ್ ಪತ್ನಿ ಆಗಾಗ ಆಟೋರಿಕ್ಷಾದಲ್ಲಿ ಓಡಾಡುತ್ತಾ ಕಾಣಿಸುತ್ತಾರೆ. ಇಷ್ಟೆಲ್ಲಾ ಸರಳ ಜೀವನ ನಡೆಸುತ್ತಿರುವ ಅವರನ್ನು ಜನ ಮತ್ತೆ ಮತ್ತೆ ಆಯ್ಕೆ ಮಾಡುತ್ತಲೇ ಇದ್ದಾರೆ.
=============
ಬುಧವಾರ, ಫೆಬ್ರವರಿ 14, 2018
ಐದು ಸಲ ಸಿಎಂ.. ಆಸ್ತಿ ಮೌಲ್ಯ ಗೊತ್ತಾದರೆ ಶಾಕ್ ಆಗ್ತೀರ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ