ಸಮುದ್ರದಲ್ಲಿ
ರೈಲು, ರಸ್ತೆ ಮಾರ್ಗ
===============
ಬಮುಡಾ ಟ್ರಯಾಂಗಲ್ ಆಫ್ ಏಷ್ಯಾ’ ಎಂದೇ ಖ್ಯಾತಿ ಪಡೆದಿರುವ ಸಮುದ್ರಭಾಗದಲ್ಲಿ ಹಡಗುಗಳು ಸಂಚರಿಸುವುದಕ್ಕೂ ಆತಂಕ ವ್ಯಕ್ತವಾಗುತ್ತದೆ. ಅಂತಹ ಪ್ರದೇಶದಲ್ಲಿ ರೈಲು ಸಂಚಾರಕ್ಕೆ ಚೀನಾ ಸಿದ್ಧತೆ ನಡೆಸಿದೆ. ಫ್ಯೂಪಿಂಗ್ ರೈಲ್ವೆ ಲೇನ್ನ ಭಾಗವಾಗಿ 10,672 ಕೋಟಿ ರೂ. ವೆಚ್ಚದಲ್ಲಿ ಪಿಂಗ್ಟನ್ ಸ್ಟ್ರೈಟ್ ರೈಲ್ವೆ ರೋಡ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ. 2013ರಿಂದ ಚೀನಾ ಇಂಜಿನಿಯರ್ಗಳು ಈ ಕೆಲಸದಲ್ಲಿ ತೊಡಗಿಕೊಂಡಿದ್ದು, ಮುಂದಿನ ವರ್ಷ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ಹೈಸ್ಪೀಡ್ ರೈಲು ಓಡಿಸಲು ಉದ್ದೇಶಿಸಲಾಗಿದೆ. 11 ಕಿ.ಮೀ. ಉದ್ದದ ಈ ಸೇತುವೆ ಎರಡು ಹಂತಗಳನ್ನು ಹೊಂದಿದ್ದು ಮೇಲ್ಭಾಗದಲ್ಲಿ ಅಷ್ಟ ಪಥ ರಸ್ತೆ ಇರಲಿದೆ. ಕೆಳಗಡೆ ರೈಲ್ವೆ ಸೇತುವೆ ಇರುತ್ತದೆ. ಇದರ ನಿರ್ವಣಕ್ಕೆ 3 ಲಕ್ಷ ಟನ್ ಸ್ಟೀಲ್, 26.60 ಲಕ್ಷ ಟನ್ ಸಿಮೆಂಟ್ ಬಳಸಲಾಗುತ್ತಿದೆ. ಇದರಲ್ಲಿ ದುಬೈನಲ್ಲಿರುವ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಂತಹ ಎಂಟು ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ.
ಈ ಪ್ರದೇಶದಲ್ಲಿ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿರುತ್ತದೆ. ವರ್ಷದ ಸರಿಸುಮಾರು 300 ದಿನ ಇಲ್ಲಿ ಗಂಟೆಗೆ 30 ಮೈಲಿ ವೇಗದಲ್ಲಿ ಗಾಳಿ ಬೀಸುತ್ತದೆ. ಇದರಿಂದ ಸುಮಾರು 10 ಮಹಡಿಗಳಷ್ಟೆತ್ತರದ ಅಲೆಗಳು ಏಳುತ್ತಿರುತ್ತವೆ. ಹೀಗಿರುವಾಗ ಇಲ್ಲಿ ಸೇತುವೆ ನಿರ್ವಣ, ಇದರಲ್ಲಿ ಹೈಸ್ಪೀಡ್ ರೈಲು ಓಡಾಟ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಕಳೆದ 20 ವರ್ಷಗಳ ಅವಧಿಯಲ್ಲಿ ಚೀನಾ ರೈಲು ಮಾರ್ಗದ ಉದ್ದ ದ್ವಿಗುಣವಾಗಿದೆ. 66,000 ಕಿಮೀ ಇಂದ 1.27 ಲಕ್ಷ ಕಿಮೀಗೆ ವಿಸ್ತರಿಸಲಾಗಿದೆ. ಅಷ್ಟೇ ಅಲ್ಲ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ರೈಲ್ವೆ ಸೇತುವೆಗಳಿರುವ ದೇಶವೆಂಬ ಹೆಗ್ಗಳಿಕೆಯೂ ಚೀನಾದ್ದು. ಅಲ್ಲಿ 60,000 ರೈಲ್ವೆ ಸೇತುವೆಗಳಿವೆ. -
=============
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ