ಗುರುವಾರ, ಫೆಬ್ರವರಿ 15, 2018

ಕೆಲ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಎಷ್ಟು ಗೊತ್ತೇ ?*

*ಕೆಲ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಎಷ್ಟು ಗೊತ್ತೇ ?*
=================
*ಹೊಸದಿಲ್ಲಿ, ಫೆ. 15: ಕೆಳ ನ್ಯಾಯಾಲಯದ ನ್ಯಾಯಮೂರ್ತಿಗಳಲ್ಲಿ ಮಹಿಳೆಯರ ಸಂಖ್ಯೆ ಶೇ. 28ಕ್ಕಿಂತ ಕಡಿಮೆ ಇದೆ ಎಂದು ಇತ್ತೀಚೆಗಿನ ವರದಿ ಬಹಿರಂಗಪಡಿಸಿದೆ.*
=================
*ಹಿರಿಯ ನ್ಯಾಯವಾದಿ ಇಂದು ಮಲ್ಹೋತ್ರ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ಭಡ್ತಿ ಮಾಡುವ ಕೊಲಿಜಿಯಂ ಶಿಪಾರಸನ್ನು ಕೇಂದ್ರ ಸರಕಾರ ಹಿಂದೆ ಕಳುಹಿಸಿದ ಕೆಲವು ದಿನಗಳ ಬಳಿಕ ಕಾನೂನು ನೀತಿಗೆ ಇರುವ ದಿಲ್ಲಿ ಮೂಲದ ತಂಕ್ ವಿಧಿ ಸೆಂಟರ್ ಈ ವರದಿ ಮಾಡಿದೆ.*
=============
*'ಟಿಲ್ಟಿಂಗ್ ದಿ ಸ್ಕೇಲ್: ಜೆಂಡರ್ ಇಂಬ್ಯಾಲೆನ್ಸ್ ಇನ್ ಲೋವರ್ ಜುಡಿಷಿಯರಿ' ಶೀರ್ಷಿಕೆಯ ಈ ವರದಿಯಲ್ಲಿ, ''ಕೆಳ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರು ಶೇ. 28ಕ್ಕಿಂತ ಕಡಿಮೆ ಇದ್ದಾರೆ. ಸಣ್ಣ ರಾಜ್ಯಗಳಾದ ಗೋವಾ, ಮೇಘಾಲಯ ಹಾಗೂ ಸಿಕ್ಕಿಂನ ಒಟ್ಟು ನ್ಯಾಯಾಧೀಶರ ಸಂಖ್ಯೆ 103. ಇದರಲ್ಲಿ ಮಹಿಳಾ ನ್ಯಾಯಮೂರ್ತಿಗಳು ಶೇ. 60 ಇದ್ದಾರೆ.'' ಎಂದು ವರದಿ ಹೇಳಿದೆ.*
=============
*ತೆಲಂಗಾಣ ಹಾಗೂ ಪುದುಚೇರಿ ಹೊರತುಪಡಿಸಿ ಇತರ ಎಲ್ಲ ರಾಜ್ಯಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಪ್ರಮಾಣ ಶೇ. 40ಕ್ಕಿಂತ ಕೆಳಗೆ ಇದೆ.*
* *ಬಿಹಾರ ಶೇ. 11.52*
* *ಜಾರ್ಖಂಡ್ ಶೇ. 13.98* * *ಗುಜರಾತ್ ಶೇ. 15.11*
* *ಜಮ್ಮು ಹಾಗೂ ಕಾಶ್ಮೀರ ಶೇ. 18.62,*
* *ಉತ್ತರಪ್ರದೇಶ ಶೇ. 12.4 ಮಹಿಳಾ ನ್ಯಾಯಮೂರ್ತಿಗಳಿದ್ದಾರೆ ಎಂದು ವರದಿ ಹೇಳಿದೆ*
=============
*ಎರಡು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ ಹಾಗೂ ನಿಕೋಬಾರ್ ದ್ವೀಪ ಹಾಗೂ ಡಾಮನ್ ಹಾಗೂ ಡಿಯುನಲ್ಲಿ ಮಹಿಳಾ ನ್ಯಾಯಮೂರ್ತಿಗಳೇ ಇಲ್ಲ ಎಂದು ವರದಿ ಹೇಳಿದೆ.*
===============
*ಭಾರತದಲ್ಲಿ ಕೆಳ ನ್ಯಾಯಾಲಯ ಮೂರು ಹಂತದ ಸ್ಥಾನವನ್ನು ಹೊಂದಿದೆ. ಜಿಲ್ಲಾ ನ್ಯಾಯಮೂರ್ತಿ, ಸಿವಿಲ್ ನ್ಯಾಯಮೂರ್ತಿ (ಹಿರಿಯ ವಿಭಾಗ) ಹಾಗೂ ಸಿವಿಲ್ ನ್ಯಾಯಮೂರ್ತಿ (ಕಿರಿಯ ವಿಭಾಗ). ಈ ವರದಿ 10 ರಾಜ್ಯಗಳ ಅಂಕಿ-ಅಂಶವನ್ನು ಮಾತ್ರ ವಿಶ್ಲೇಷಿಸಿದೆ. ಕೆಳ ಹಂತದಿಂದ ಮೇಲೆ ಚಲಿಸುತ್ತಿದ್ದಂತೆ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಇಳಿಕೆಯಾಗಿರುವುದನ್ನು ವರದಿ ಕಂಡುಕೊಂಡಿದೆ.*
===============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ