ಕ್ರೀಡಾಪಟುಗಳು ನಿವೃತ್ತರಾಗುವ ವಯಸ್ಸಿನಲ್ಲಿ ಕ್ರೀಡಾಕ್ಷೇತ್ರಕ್ಕೆ ಬಂದು ಸಾಧನೆ ಮಾಡುತ್ತಿರುವವರು ಅಂಜಲಿ ಸರೋಗಿ (40). ಮಗಳು ಓದುತ್ತಿದ್ದ ಕಾಲೇಜಿನ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ ಮುಂಬೈ ನಿವಾಸಿ ಅಂಜಲಿ; ಅದನ್ನೇ ಪ್ರವೃತ್ತಿಯಾಗಿಸಿಕೊಂಡರು. ಪ್ರಾರಂಭದಲ್ಲಿ ಸ್ಥಳೀಯ ಟೂರ್ನಿಗಳಲ್ಲಿ ಪಾಲ್ಗೊಂಡ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಗಳಲ್ಲೂ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಸಾಂಸಾರಿಕ ಜೀವನದ ಜತೆಗೇ ಕಠಿಣ ಅಭ್ಯಾಸ ನಡೆಸುತ್ತಿರುವ ಅವರು ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ನಡೆದ 26 ಕಿ.ಮೀ ಮ್ಯಾರಥಾನ್ ಟೂರ್ನಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 89 ಕಿ.ಮೀ. ದೂರದ ಕಾಮ್ರೆಡ್ಸ್ ಮ್ಯಾರಥಾನ್ನಲ್ಲಿಯೂ ಪದಕ ಗೆದ್ದಿದ್ದಾರೆ. ಮುಂದಿನ ಒಲಿಂಪಿಕ್ಸ್ ಪಂದ್ಯದಲ್ಲಿ ಪಾಲ್ಗೊಂಡು ದೇಶಕ್ಕೆ ಪದಕ ತಂದುಕೊಡುವ ಗುರಿ ಅವರದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ