ಬುಧವಾರ, ಫೆಬ್ರವರಿ 14, 2018

ಸರ್ದಾರ್ ಪಟೇಲ್ ಏಕತಾ ಪ್ರತಿಮೆ ಅ. 31ಕ್ಕೆ ಉದ್ಘಾಟನೆ

ಸರ್ದಾರ್ ಪಟೇಲ್ ಏಕತಾ ಪ್ರತಿಮೆ ಅ. 31ಕ್ಕೆ ಉದ್ಘಾಟನೆ
===================
ವಡೋದರಾ: ಗುಜರಾತ್​ನ ಸರ್ದಾರ್ ಸರೋವರ್ ಅಣೆಕಟ್ಟು ಬಳಿಯ ಸಾಧು ಬೆಟ್​ನಲ್ಲಿ ನಿರ್ವಿುಸಲಾಗುತ್ತಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಏಕತಾ ಪ್ರತಿಮೆ ಉದ್ಘಾಟನೆಯನ್ನು ಅವರ ಜನ್ಮದಿನವಾದ ಅ.31ರಂದು ನಡೆಸಲು ಸರ್ಕಾರ ತೀರ್ವನಿಸಿದೆ.
============
ಉಕ್ಕಿನ ಮನುಷ್ಯ ಖ್ಯಾತಿಯ ಪಟೇಲ್ ಅವರ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಗುಜರಾತ್ ಮುಖ್ಯ ಕಾರ್ಯದರ್ಶಿ ಜೆ. ಎನ್. ಸಿಂಗ್ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ನಿಗದಿತ ಅವಧಿಯೊಳಗೆ ಕಾರ್ಯ ಪೂರ್ಣಗೊಳಿಸಿ, ಪ್ರತಿಮೆ ಉದ್ಘಾಟಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಏಕತಾ ಪ್ರತಿಮೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸಿನ ಯೋಜನೆಯಾಗಿದೆ. 2013ರ ಅ. 31ರಂದು ಪ್ರಧಾನಿ ಮೋದಿ ಪಟೇಲ್ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಜಗತ್ತಿನ ಅತಿ ಎತ್ತರದ ಪ್ರತಿಮೆ ಇದಾಗಲಿದ್ದು, 3,000 ಕೋಟಿ ರೂ. ವೆಚ್ಚವಾಗಲಿದೆ.-
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ