ಗುರುವಾರ, ಫೆಬ್ರವರಿ 15, 2018

ಮಾಹಿತಿಗಾಗಿ

*ಪಿಯುಸಿ ಪಾಸದವರಿಗೆ ಸುವರ್ಣ ಅವಕಾಶ : ಮೈಸೂರಿನ `ವಾಕ್-ಶ್ರವಣ ‘ ಸಂಸ್ಥೆಯಲ್ಲಿ ಪದವಿಯೊಂದಿಗೆ ಸೂಕ್ತ ತರಬೇತಿ*
================
*ಮೈಸೂರು, ಫೆ.15, 2018 : (www.justkannada.in news ) ನಗರದ ಪ್ರತಿಷ್ಠಿತ ` ವಾಕ್ ಮತ್ತು ಶ್ರವಣ ಸಂಸ್ಥೆ’ (ಐಷ್) ನಿಂದ ಮೈಸೂರು ವಿಶ್ವವಿದ್ಯಾನಿಲಯ ಸಂಯೋಜನೆ ಹಾಗೂ ಭಾರತೀಯ ಪುನರ್ವಸತಿ ಮಂಡಳಿ ಮಾನ್ಯತೆಯೊಂದಿಗೆ ನೂತನವಾಗಿ ` ವಾಕ್ ಮತ್ತು ಶ್ರವಣ’ ವಿಷಯದಲ್ಲಿ ಪದವಿ ಆರಂಭಿಸಿದೆ.*
*==========≠====*
*ಪಾಂಡಿಚೇರಿ ಇಂಫಾಲ ಮತ್ತು ಜಬಲ್ ಪುರದಲ್ಲಿರುವ ಅಧ್ಯಯನ ಕೇಂದ್ರಗಳಲ್ಲೂ ಈ ಪದವಿಯನ್ನು ಪರಿಚಯಿಸಲಾಗಿದೆ. ಆರು ಸೆಮಿಸ್ಟರ್ ಮತ್ತು ಒಂದು ವರ್ಷದ ಇಂಟರ್ನ್ ಶಿಪ್ ಸೇರಿ ನಾಲ್ಕು ವರ್ಷ ವಿದ್ಯಾರ್ಥಿಗಳಿಗೆ ವಾಕ್ ಭಾಷೆ ಮತ್ತು ಶ್ರವಣಕ್ಕೆ ಸಂಬಂಧಿಸಿದ ದೋಷಗಳು, ಅವುಗಳನ್ನು ಗುರುತಿಸುವುದು ಮತ್ತು ಚಿಕಿತ್ಸೆ ನೀಡುವುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಬೋಧನೆ, ಪ್ರಾಯೋಗಿಕ ತರಬೇತಿಯೇ ಕಲಿಕೆಯಲ್ಲಿ ಪ್ರಧಾನವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ನೇರ ಅನುಭವ ಸಿಗಲಿದೆ. ತರಬೇತಿ ಮುಗಿಸಿದವರು ಸಂವಹನ ದೋಷಗಳಿಗೆ ಚಿಕಿತ್ಸೆ ನೀಡಲು ಅರ್ಹರಾಗುತ್ತಾರೆ ಎಂದು ಐಷ್ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ ಹೇಳಿದ್ದಾರೆ.*
*=============*
*ಐಷ್ ನಲ್ಲಿರುವ 62 ಸೀಟುಗಳ ಪೈಕಿ 33 ಸೀಟುಗಳು ಸರಕಾರಿ ಕೋಟಾ ಹಾಗೂ 29 ಸೀಟುಗಳನ್ನು ಸೆಲ್ಫ್ ಫೈನಾನ್ಸ್ ಸ್ಕೀಂನಡಿ (ಎಸ್ಎಫ್ಎಸ್) ಹಂಚಲಾಗುತ್ತದೆ. ಈ ಎರಡೂ ವಿಭಾಗದಲ್ಲೂ ರೋಸ್ಟರ್ ಪದ್ಧತಿ ಪ್ರಕಾರ ಎಲ್ಲ ವರ್ಗಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ. ಸರಕಾರಿ ಕೋಟಾದ 33 ಸೀಟುಗಳಲ್ಲಿ ಪರಿಶಿಷ್ಟ ಜಾತಿಗೆ 5 ಪರಿಶಿಷ್ಟ ಪಂಗಡಕ್ಕೆ 3, ಹಿಂದುಳಿದ ವರ್ಗಕ್ಕೆ 9 ಸೀಟುಗಳು ಮೀಸಲಾಗಿದೆ. ಎಸ್ಎಫ್ಎಸ್ ಕೋಟಾದಲ್ಲಿ ಪರಿಶಿಷ್ಟ ಜಾತಿಗೆ 4, ಪರಿಶಿಷ್ಟ ಪಂಗಡಕ್ಕೆ 2 ಹಾಗೂ ಹಿಂದುಳಿದ ವರ್ಗಕ್ಕೆ 8 ಸೀಟುಗಳನ್ನು ಕಾಯ್ದಿರಿಸಲಾಗಿದೆ. ಐಷ್ ನಡೆಸುವ ವಿವಿಧ ಡಿಪ್ಲೋಮಾ ಪಡೆದವರಿಗೆ ಆದ್ಯತೆ ಇದೆಯಾದರೂ, ಅವರಿಗೂ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.*
==============
*ಪ್ರವೇಶ ಅರ್ಹತೆ: 12ನೇ ತರಗತಿ ಇಲ್ಲವೇ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತಶಾಸ್ತ್ರ ಹಾಗೂ ಜೀವ ವಿಜ್ಞಾನಶಾಸ್ತ್ರದಲ್ಲಿ ಶೇ.50ರಷ್ಟು (ಪರಿಶಿಷ್ಟರಾದರೇ ಶೇ.45) ಅಂಕ ಪಡೆದವರು ಪ್ರವೇಶ ಪಡೆಯಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವ ವಿಜ್ಞಾನಶಾಸ್ತ್ರ ವಿಷಯಗಳ ಪೈಕಿ ಮೂರು ವಿಷಯಗಳನ್ನು ಪಿಯುಸಿ ಹಂತದಲ್ಲಿ ಕಡ್ಡಾಯವಾಗಿ ಕಲಿತಿರಬೇಕು ಎಂದು ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-570006 ದೂರವಾಣಿ: 0821-2502000, 2502100,290007, ಫ್ಯಾಕ್ಸ್ 0821-2510515 ಸಂಪರ್ಕಿಸುವುದು.*
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ